ರೈತರಿಗಾಗಿ ಸಾರಿಗೆ ವ್ಯವಸ್ಥೆ
ಸಂಘದಿಂದ ಖರೀದಿಸಿದ ರಸಗೊಬ್ಬರವನ್ನು ರೈತರ ಹೊಲಕ್ಕೆ ನೇರವಾಗಿ ಅತ್ಯಂತ ಕಡಿಮೆ ಬಾಡಿಗೆ ದರದಲ್ಲಿ ಕೊಂಡೊಯ್ಯಲು ಸಂಘದಿಂದ “ರೈತಮಿತ್ರ” ವಾಹನ ಸೌಲಭ್ಯವನ್ನು ಒದಗಿಸಲಾಗಿದೆ.
ಸದಸ್ಯರ ಪ್ರಯೋಜನಕ್ಕಾಗಿ ಒಕ್ಕಲು ತನದ ಉಪಕರಣಗಳನ್ನು ಬಾಡಿಗೆಯಿಂದ ನೀಡಲಾಗುತ್ತಿದೆ. ಸದಸ್ಯರಿಗೆ ಬಾಡಿಗೆ ಆಧಾರಿತ ಟ್ರಾಕ್ಟರ, ಟ್ರೇಲರ, ರೂಟಾವೇಟರ್ ಹಾಗೂ ರಾಶಿ ಮಶೀನ ಲಭ್ಯವಿರುತ್ತದೆ.
ಇತ್ತೀಚಿಗೆ ಸಂಘವು ರಾಜ್ಯ ಸರ್ಕಾರ ಮತ್ತು ಕೃಷಿ ಇಲಾಖೆಯ ಸಹಾಯಧನ ಯೋಜನೆಯಡಿಯಲ್ಲಿ ದಿ.ಬಿ.ಡಿ.ಸಿ.ಸಿ ಬ್ಯಾಂಕ್ ಲಿ., ಬೆಳಗಾವಿ ಇವರ ಆರ್ಥಿಕ ನೆರವಿನಿಂದ ಸಂಘಕ್ಕೆ ಕಬ್ಬು ಕಟಾವು ಯಂತ್ರ ಖರೀದಿಸಿದ್ದು, ಸದಸ್ಯರು ಇದರ ಪ್ರಯೋಜನವನ್ನು ಪಡೆಯುತ್ತಿದ್ದಾರೆ.